ಮಾಯಕೊಂಡ -
ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಒಂದು ಊರು.  ಹೋಬಳಿ ಕೇಂದ್ರ.  ದಾವಣಗೆರೆ ಆಗ್ನೇಯದಲ್ಲಿ 23 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರೈಲು ಮಾರ್ಗದಲ್ಲಿದೆ.  ಜನಸಂಖ್ಯೆ 4,642 (1981).  ಈ ಊರು ವ್ಯಾಪಾರಸ್ಥಳವಾಗಿ ಅಭಿವೃದ್ಧಿಯಾಗುತ್ತಿದೆ.  ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳಿವೆ.  ಪುರಸಭಾಡಳಿತವಿದೆ.  ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ಗುಡಿಗಳಿವೆ.  ನರಸಿಂಹಸ್ವಾಮಿ ಗುಡಿಯ ನವರಂಗಕ್ಕೆ ದ್ರಾವಿಡ ಶಿಲ್ಪ ಶೈಲಿಯ ನಾಲ್ಕು ಕಂಬಗಳಿವೆ.  ಈ ಘನಾಕೃತಿಯ ಕಂಬಗಳ ಮೇಲೆ ಗಣೇಶ, ಹನುಮಂತ ಮೊದಲಾದ ದೇವತೆಗಳೂ ಪುರುಷಾಮೃಗ, ನೃತ್ಯಗಾತಿಯರು, ದರ್ಪಣಮೋಹಿನಿ, ಕಾಳಿಂಗ ಮೊದಲಾದ ಉಬ್ಬುಶಿಲ್ಪದ ರಚನೆಗಳೂ ಇವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ